ನವದೆಹಲಿ, ಡಿಸೆಂಬರ್ 14 : ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಭರಾಟೆ ಶುರುವಾಗಿದ್ದು, ಯಾವ ಪಕ್ಷ ಜಯಭೇರಿ ಬಾರಿಸುತ್ತದೆ, ಯಾವ ಪಕ್ಷ ಮಣ್ಣು ಮುಕ್ಕುತ್ತದೆ ಎಂಬುದರತ್ತ ಎಲ್ಲರ ಕಣ್ಣು ನೆಟ್ಟಿದೆ.ಎಬಿಪಿ ನ್ಯೂಸ್ - ಸಿಎಸ್ ಡಿಎಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದು, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳೆರಡರ ನಾಯಕರ ಹೊಟ್ಟೆಯಲ್ಲಿ ಪಾತರಗಿತ್ತಿಯು ಹಾರಾಟ ನಡೆಸಿದೆ, ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಗುಜರಾತ್ ನ ಸೌರಾಷ್ಟ್ರ ಮತ್ತು ಕಛ್ ಬಿಜೆಪಿ ಜಯಭೇರಿ ಬಾರಿಸಲಿದ್ದು, 54 ಕ್ಷೇತ್ರಗಳಲ್ಲಿ 31-37ರಲ್ಲಿ ಜಯಶಾಲಿಯಾಗಲಿದೆ. ಕಾಂಗ್ರೆಸ್ಸಿಗೆ ಕೇವಲ 16-22 ಸ್ಥಾನಗಳು ಲಭಿಸಲಿವೆ. 1 ಕ್ಷೇತ್ರ ಪಕ್ಷೇತ್ರರ ಪಾಲಾಗಲಿದೆ.ದಕ್ಷಿಣ ಗುಜರಾತ್ ನಲ್ಲಿ ಬಿಜೆಪಿ ಶೇ.52 ಮತಗಳನ್ನು ಕಬಳಿಸಲಿದ್ದು, 21-27 ಕ್ಷೇತ್ರಗಳಲ್ಲಿ ಗೆಲ್ಲಲಿದೆ.ಕಾಂಗ್ರೆಸ್ ಶೇ.40 ಮತ ಪಡೆಯಲಿದ್ದು, 9-13 ಸ್ಥಾನಗಳನ್ನು ಗೆಲ್ಲಲಿದೆ. ಶೇ.8ರಷ್ಟು ಮತಗಳು ಇತರ ಪಕ್ಷಗಳ ಪಾಲಾಗಲಿವೆ. ಉತ್ತರ ಗುಜರಾತ್ ನಲ್ಲಿ ಚುನಾವಣಾಪೂರ್ವ ಸಮೀಕ್ಷೆ ಸಂಪೂರ್ಣವಾಗಿ ತಲೆಕೆಳಗು ಆಗಿದ್ದು, ಬಿಜೆಪಿ 32-38 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 16-18 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಉತ್ತರ ಗುಜರಾತ್ ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಎಬಿಪಿ ನ್ಯೂಸ್ ಹೇಳಿತ್ತು.
Results of Gujarat Exit Poll 2017 are out now. Read latest updates related to exit poll done by ABP News-CSDS. BJP and Congress are major parties here.